Disclaimer: This voluntary translation work is only for fun and no commercial and/or monetory gains are obtained from this work. The translator has mentioned the original author in the works, and takes credit only for the translations.

Thursday, April 20, 2006

ಕೇಶು ಮತ್ತು ನಾಣಿ ಗಣಿತ ಸೀರೀಸ್ ಸಮ್ಮರಿ

ಗಣಿತ ಸೀರೀಸಿನ ಎಲ್ಲಾ ಕಾರ್ಟೂನ್ಗಳನ್ನ ಒಟ್ಟಿಗೆ ಹಾಕುತ್ತಿದ್ದೇನೆ. ಒಟ್ಟಿಗೆ ಎಲ್ಲಾ ಓದುವುದಕ್ಕೆ ಸುಲಭವಾಗುತ್ತದೆ :)

ಕೇಶು & ನಾಣಿ -- ಗಣಿತದ ಸೀರೀಸ್ ಮುಗಿಸುತ್ತಾ

ನಿನ್ನೆಯೇ ಹೇಳಿದ ಹಾಗೆ ಇಂದಿನ ಕಾರ್ಟೂನ್ ಜೊತೆಗೆ ಗಣಿತದ ಸೀರೀಸ್ ಮುಗಿಯಿತು. ಕೇಶವ ಮತ್ತು ನಾಣಿ ಮತ್ತೆ ಮುಂದಿನ ವಾರ ಹೊಸ ಸೀರೀಸ್ ನಲ್ಲಿ ಬರಲಿದ್ದಾರೆ :) ಅಲ್ಲಿಯವರೆಗೆ ಈ ಕಾರ್ಟೂನ್. ಈ 18 ಕಾರ್ಟೂನ್ ಇರುವ ಸೀರೀಸ್‌ನಲ್ಲಿ ನಿಮಗೆ ಹಿಡಿಸಿದ್ದು/ಹಿಡಿಸದಿದ್ದದ್ದು ಏನಾದರು ಇದ್ದರೆ ಪ್ರತಿಕ್ರಿಯೆಗಳನ್ನು ಹಾಕಲು ಮರೆಯದಿರಿ

ಟೆಸ್ಟ್ ಮುಗಿಯಿತು

ಕಡೆಗೂ ಗಣಿತದ ಟೆಸ್ಟ್ ಮುಗಿಯಿತು. ಇದು ಈ ಸೀರೀಸ್ ನಲ್ಲಿ ಉಪಾಂತಿಮ ಕಾರ್ಟೂನ್ :)ಶ್ರೀನಿ ಸಾರ್ ಗೆ ಡಿವಿಗಳು -- ಫೋಟೋಲಿ ಇದ್ದ ತಪ್ಪನ್ನು ತಿದ್ದಿದ್ದಕ್ಕೆ :)

ಕೇಶು ಮತ್ತು ಗಣಿತ

ಗಣಿತದ ಟೆಸ್ಟ್ ಮುಗಿದ ಮೇಲೆ...

ಅಂತರಿಕ್ಷದಲ್ಲಿ ೬+೫ ಕೂಡಿಸಿದ ಕೇಶು...

ಗಣಿತದ ಸೀರೀಸ್ ಮುಂದು ವರಿಸುವ ಮುಂಚೆ ಕೆಲವು ಮುನ್ನುಡಿ. ಮೊದಲನೆಯದಾಗಿ ಕೆಲವು ಓದುಗರು ಫೋಟೊ ಎಡಿಟಿಸಲು ಯುನಿಕೋಡ್ ಬಳಸಿ ಎಂದು ಹೇಳಿದ್ದಾರೆ. ನನಗೆ ಇದು ಅರ್ಥವಾಗಲಿಲ್ಲ. ನಾನು ಮಾಡೋದು ಹೀಗೆ. ಕಾರ್ಟೂನ್ ಜಿಫ್ ಗಳನ್ನ ತೆಗೆದುಕೊಂಡು, ಅದರ ಇಂಗ್ಲಿಷ್ ಮಾತುಗಳನ್ನ ತೆಗೆದು, ಕನ್ನಡವನ್ನ ಟೈಪಿಸುತ್ತೇನೆ. ಕೆಲವೊಮ್ಮೆ ಸ್ವಲ್ಪ ಕತ್ತರಿಸು ಅಂಟಿಸುವ ಕೆಲಸ ಮಾಡಬೇಕಾಗುತ್ತೆ. ನಾನು ಮಾಡುವುದು ಹೀಗೆ. ಈ ಯುನಿಕೋಡ್ ಎಡಿಟಿಸೋದು ಅಂದರೆ ಏನು? ಯಾರಾದರೂ ದಯವಿಟ್ಟು ಸ್ವಲ್ಪ ವಿವರವಾಗಿ ಹೇಳುತ್ತೀರ? :)

ಇನ್ನು ಮುಂದೆ ಇಂದು ಭಾರತ ಇಂಗ್ಲಾಂಡ್ ವಿರುದ್ಧ ಎರಡೆನೆಯ ಟೆಸ್ಟ್ ಪಂದ್ಯದಲ್ಲಿ ತೇರ್ಗಡೆಯಾಗಿ ಸರಣಿಯಲ್ಲಿ 1-0 ಯ ಮುನ್ನಡೆ ಪಡೆದಿದೆ. ಕುಂಬ್ಳೆ 500 ವಿಕೆಟ್ ಪಡೆದ ಮೊದಲ ಭಾರತೀಯರಾಗಿದ್ದಾರೆ. ಮೊದಲನೆಯ ಟೆಸ್ಟ್ ನಲ್ಲಿ ಗೆಲುವು ಸಾಧನೆಯ ಬಗ್ಗೆ ಸ್ವಲ್ಪವೂ ಇಚ್ಛೆ ತೋರಿಸಲಿಲ್ಲವೆಂದು ಹೇಳಿದವರಿಗೆ ಒಳ್ಳೆಯ ಉತ್ತರ ನೀಡಿದೆ.

ಆದರೆ ಭಾರತೀಯ ಗೆಲುವಿನ ಕೆಲವು ಘಂಟೆಗಳ ಮುನ್ನ ನಡೆದ ಒಂದು ಆಟ ಜಗತ್ತಿನ ಕ್ರಿಕೆಟ್ ಆಸಕ್ತರ ಬಾಯಿಯಲ್ಲಿ ಇನ್ನೂ ಉಳಿದಿದೆ.

ನಿನ್ನೆ ನಡೆದ ಅಮೋಘ ಘಟನೆ -- ಆಸ್ಟ್ರೇಲಿಯ ೫೦ ಓವರ್ ಗಳಲ್ಲಿ 434ರನ್. ದಕ್ಷಿಣ ಆಫ್ರಿಕ ತಾವೇನೂ ಕಮ್ಮಿ ಇಲ್ಲವೆಂದು 49.5 ಓವರ್ ಗಳಲ್ಲಿ 438 ರನ್. ಅಬ್ಭಾ ಎಂತ ಅದ್ಭುತ ಸಾಧನೆ. ಈ ಮ್ಯಾಚ್ ನ ಹೈಲೈಟ್ಸ್ ನೋಡಿದೆ. ಹೊಸದಾಗಿ ಶುರುವಾಗಿರುವ 20-20 ಪಂದ್ಯದ ಹಾಗೆ ಇತ್ತು. ಪ್ರಾಯಶಃ ಈ 20-20 ಪಂದ್ಯಗಳ ಪ್ರಭಾವವೇ ಇರಬಹುದು. ಈ ಸರಣಿಯ ಮುಂಚೆ ದ.ಆ ಆಸ್ಟ್ರೇಲಿಯವನ್ನು 20-20 ಪಂದ್ಯದಲ್ಲಿ ಸೋಲಿಸಿದ್ದು ನಾವು ಇಲ್ಲಿ ಸ್ಮರಿಸಬಹುದು.

ಬೈ.ದಿ.ವೆ ಭಾರತ ಯಾವಾಗ 20-20 ಆಡುವುದು? ಅಥವ ಏಕ ದಿವಸೀಯ ಪಂದ್ಯಗಳು ಶುರುವಾದಾಗ ಮಾಡಿದ ತಪ್ಪನ್ನು ಈಗಲೂ ಮಾಡುವರ?

ಓ.ಕೆ. ಬ್ಲೇಡ್ ಸಾಕು. ಈಗ ಕಾರ್ಟೂನ್. ದ. ಆ ವಿರುದ್ಧ ಇದ್ದ ಸವಾಲಿನಂತೆ ದೊಡ್ಡದಲ್ಲದಿದ್ದರೂ ಯಾಕೋ ನಮ್ಮ ಕೇಶು 6+5ರನ್ನೂ ಕೂಡಿಸಲು...

ಕ್ಯಾಪ್ಟೆನ್ ಕೆಂಪಣ್ಣ ಅಂತರಿಕ್ಷದಲ್ಲಿ...

ಇಂದು ಶುಕ್ರವಾರ ಆಗಿರುವುದರಿಂದ ಸ್ವಲ್ಪ ಬೇಗನೇ ಕಾರ್ಟೂನ್ ಹಾಕಿ ಬಿಡುತ್ತಿದ್ದೇನೆ. ವಾರಾಂತ್ಯದಲ್ಲಿ ಹಾಕಲು ಆಗುವುದಿಲ್ಲ. ಸೋಮವಾರ ಮುಂದುವರಿಸುತ್ತೇನೆ.

ಬೈ ದಿ ವೆ, ನೀವೂ ಕೇಶು ಜೊತೆ ಗಣಿತ ಕಲಿಯುತ್ತಿದ್ದೀರ?


ವಿ ಸೂ: ಆತುರದಲ್ಲಿ ನಿನ್ನೆಯ ಕಾರ್ಟೂನನ್ನು ಮತ್ತೆ ಅಪ್ಲೋಡಿಸಿದ್ದೆ. ಈ ಅಡಚನೆಗಾಗಿ ಕ್ಷಮಿಸಿ :)

೬ ಮತ್ತು ೫ ಅಂಕಿಗಳನ್ನು ಅಂತರಿಕ್ಷದಲ್ಲಿ ಕೂಡುವುದು

ಕಳೆದ ಬಾರಿ ಕೇಶವನನ್ನು ಲೆಕ್ಕದ ಟೆಸ್ಟ್ ನಲ್ಲಿ ಕೂರಿಸಿದೆವು. ಮೊದಲನೇ ಪ್ರಶ್ನೆ ೬+೫=? ಎಂದು. ಇದನ್ನು ಕಂಡು ಹಿಡಿಯಲು ಕೇಶು ಅಂತರಿಕ್ಷಕ್ಕೆ ತೆರಳಿದ. ಈಗ ೬+೫ ಅನ್ನು ಅಂತರಿಕ್ಷದಲ್ಲಿ ನಮ್ಮ ಕೇಶು ಹೇಗೆ ಕೂಡಿಸುತ್ತಾನೆ ಎಂದು ನೋಡೋಣವೇ?

ಕೇಶು ಕ್ಯಾಪ್ಟೆನ್ ಕೆಂಪಣ್ಣನಾದ...

ಗಣಿತದಲ್ಲಿ ಪ್ರವೀಣನಲ್ಲದಿದ್ದರೂ, ಕೇಶುಗೆ ಬೇರೆ ಏಷ್ಟೋ ವಿಷಯಗಳಲ್ಲಿ ಬಹಳ ಆಸಕ್ತಿ. ತಾನು ಒಬ್ಬ ಅಂತರಜಾಲದ ಮಹಾಯಾನಿಯಾಗಬೇಕೆಂಬ ಆಸೆ. ಇಲ್ಲದಿದ್ದರೆ ಸೂಪರ್ ಮ್ಯಾನ್ ಆಗುವ ಆಸೆ (ಇದನ್ನು ನೀವು ನನ್ನ ಮೊದಲ ಕಾರ್ಟೂನಿನಲ್ಲಿ ನೋಡಬಹುದು) ಹೀಗೆ ಎಂದಾದರೊಮ್ಮೆ ದೊಡ್ಡ ಮನುಷ್ಯನಾಗಲು ಕೇಶು ಆಶಿಸುತ್ತಿದ್ದಾನೆ.

ಈ ಕಳೆದ ಕೆಲ ದಿನಗಳಲ್ಲಿ ಕೆಲವು ಹೊಸ ಪಾತ್ರಗಳ ಪರಿಚಯವಾಗಿದೆ -- ಮೇರಿ ಮೇಡಂ, ಸುಶಿ. ಇದೇ ದಿಟ್ಟಿನಲ್ಲಿ ಇಂದು ಕ್ಯಾಪ್ಟೆನ್ ಕೆಂಪಣ್ಣ. ನೋಡಿ ಆನಂದಿಸಿ :)

ಟೆಸ್ಟ್ ನಲ್ಲಿ ಕೇಶು ಸುಶಿಯ ಜೊತೆ...

ಕೇಶು ಸಹಪಾಠಿ ಸುಶಿ ಅಂದರೆ ಸುಶೀಲಾ ಹೆಗಡೆ. ಇವಳು ಕೇಶುವಿನ ತದ್ವಿರುದ್ಧ. ಬುದ್ಧಿವಂತೆ. ಆದರೆ ಯಾವಾಗಲೂ ಕೇಶು ಬಲೆಗೆ ಬೀಳುತ್ತಿರುತ್ತಾಳೆ. ಕೇಶುಗೆ ಇವಳನ್ನು ಪೀಡಿಸದೇ ಇದ್ದಲ್ಲಿ ದಿನ ಮುಂದಕ್ಕೆ ಸಾಗೊಲ್ಲ :)

ಈಗ ಗಣಿತದ ಕಥೆ ಮುಂದುವರೆಸುತ್ತಾ ಕೇಶು -- ಸುಶಿ ಇಬ್ಬರ ಸಂಭಾಶಣೆ

ಕೇಶು ಮತ್ತು ಗಣಿತದ ಟೆಸ್ಟ್

ಗಣಿತದಲ್ಲಿ ಪಂಟನಾಗಿರುವ ನಮ್ಮ ಕೇಶು ಈಗ ಗಣಿತದ ಟೆಸ್ಟ್ ಬರೆಯಲು ಸಿದ್ಧನಾಗುತ್ತಿದ್ದಾನೆ...

ಕೇಶು ಮತ್ತು ನಾಣಿ

ಕೇಶು ಅಪ್ಪನಿಂದ ಗಣಿತ ಕಲಿತು ಈಗ ನಾಣಿಗೆ ಹೇಳಿಕೊಡುತ್ತಿದ್ದಾನೆ. ಅವರ ಅಪ್ಪನಿಗೆ ಒಂದು ಪ್ರೈಜ್ ಕೊಡಿಸಬೇಕು. ಅಷ್ಟು ಕಷ್ಟ ಪಟ್ಟು ಅವನಿಗೆ ಹೇಳಿ ಕೊಡೂತ್ತಿದ್ದಾರೆ...

ನೋಡಿ ಆನಂದಿಸಿ ಚೆನ್ನಾಗಿ ನಕ್ಕುಬಿಡಿ... ಲಾಫ್ಟರ್ ಥೆರಪಿ *ಹೆಬ್ಬೆರಳು ಮೇಲಕ್ಕೆ*

ಕೇಶು ಅಪ್ಪನಿಂದ ಗಣಿತ ಕಲಿಯುವುದು...

ಈ ಮೂರ್ನಾಲ್ಕು ದಿನಗಳಿಂದ ತೊಡೆಮೇಲೆ, ಅರ್ಥಾತ್ ಲ್ಯಾಪ್‌^ಟಾಪ್ ಇಲ್ಲದಿದ್ದ ಕಾರಣ ನಮ್ಮ ಕೇಶು ನಾಣಿ ಈ ಕಡೆ ಬರಲಾಗಲಿಲ್ಲ. ಈ ಸಂದರ್ಭಕ್ಕೂ ನಿನ್ನೆ ಅಮೇರಿಕದ ರಾಷ್ಟ್ರಪತಿ ಜಾರ್ಜ್ ಬುಶ್ ಭಾರತಕ್ಕೆ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಶು ನಾಣಿ ಇಬ್ಬರೂ ಸ್ಪಷ್ಟ ಪಡಿಸಲು ಇಚ್ಛಿಸಿದ್ದಾರೆ.

ಕೇಶು ಮತ್ತು ಗಣಿತ ಸೀರೀಸ್ ಮುಂದುವರಿಸುತ್ತಾ.... ಊ.. ಹ್ಯಾವ್ ಫನ್ನು

Tuesday, March 21, 2006

ಕೇಶು ಮತ್ತು ಗಣಿತ... ಮುಂದುವರಿಸುತ್ತಾ

ಈ ಕಾರ್ಟೂನ್^ಗಳನ್ನ ಯಾರಾದರು ಓದುತ್ತಿದ್ದಾರ ಎಂದು ತಿಳಿದಿಲ್ಲ... ಆದರೂ ಪೋಶ್ತಿಸುವ ಆಸೆ. ಅದಕ್ಕೇ ಪೊಸ್ಟಿಸುತ್ತಿದ್ದೇನೆ. ಓದುಗರು ಓದಿದ ಮೇಲೆ ಟಿಪ್ಪಣಿ ಹಾಕಿದರೆ ಬಹಳ ಖುಷಿಯಾಗುತ್ತದೆ :)

ಕೇಶು ಮತ್ತು ಗಣಿತ

ಗಣಿತದ ಸೀರೀಸ್ ಮುಂದುವರಿಸುತ್ತಾ...

ಕೇಶು ಮತ್ತು ಸಾಪೇಕ್ಷ ಸಿದ್ಧಾಂತ -- Theory of Relativity

ಕೇಶು ನ ದಡ್ಡ ಎಂದುಕೊಂಡಿರೆ? ಸ್ವಲ್ಪ ತಡೆಯಿರಿ. ನಾನು ಮುಂಚೆಯೇ ಹೇಳಿದ ಹಾಗೆ ಕೆಲವು ವುಷಯ ಬಾರದಿದ್ದರೂ ಕೆಲವು ವಿಷಯದಲ್ಲಿ ಕೇಶು ಪರಿಣತ. ಈಗ ನೋಡಿ ನಾಣಿ ಗೆ ಸಾಪೇಕ್ಷ ಸಿದ್ಧಾಂತವನ್ನು (Theory of Relativity) ಹೇಳಿಕೊಡುತ್ತಿದ್ದಾನೆ :)

ಈ ಕಾರ್ಟೂನ್ ಓದುವಾಗ ನನಗೆ ಅನ್ನಿಸಿತು. ಶಾಲೆಗಳಲ್ಲಿ ಮಕ್ಕಳಿಗೆ ಮಗ್ಗಿಯನ್ನು ಗಟ್ಠೊಡೆಯಲು ಹೇಳುತ್ತಾರೆ ನಮ್ಮ ಅಧ್ಯಾಪಕರು. ನನಗೆ ಕೂಡುವುದು ಕಳೆಯುವುದನ್ನು ಶಾಲೆಯಲ್ಲಿ ಹೀಗಿ ಹೇಳಿಕೊಟ್ಟಿದ್ದು -- 10+5=?, 10 in mind, 5 in hand. After 10, 11, 12, 13, 14, 15 ಅಂತ ಕೈಯಲ್ಲಿ ಏಣಿಸುತ್ತಿದ್ದೆ. ಇದರ ಬದಲು ಮಕ್ಕಳಿಗೆ ಹಣ್ಣುಗಳೋ ಅಥವ ಆಟದ ಸಾಮಾನುಗಳ ಜೊತೆ ಕಲಿಸಿದರೆ ಮಕ್ಕಳು ಹುಮ್ಮಸ್ಸಿನಿಂದ ಕಲಿಯುತ್ತಾರೆ ಎಂದು ನನ್ನ ಭಾವನೆ. ಇದು ಅಧ್ಯಾಪಕರ ಮೇಲೆ ಟೀಕೆಯಲ್ಲ. ನಮ್ಮ ಶಿಕ್ಷಣ ಪದ್ದತಿಯ ಮೇಲೆ.

ಮಕ್ಕಳಿಗೆ ಪುಸ್ತಕ ಕೊಟ್ಟು ಎಲ್ಲಾ ಕಲಿ ಎನ್ನುವ ಬದಲು, ಪ್ರಕೃತಿಯ ಜೊತೆಗೂಡಿ ಆಟವಾಡುತ್ತಾ ಕಲಿತು, ಪುಸ್ತಕ ಜ್ಞಾನದ ಜೊತೆ ವ್ಯಾವಹಾರಿಕ ಮತ್ತು ಸಾಮಾಜಿಕ ಜ್ಞಾನವನ್ನೂ ಮೂಡಿಸುವುದು ಮುಖ್ಯ ಎಂದು ನನ್ನ ಭಾವನೆ. ನೀವು ಏನಂತೀರಿ? ಟಿಪ್ಪಣಿಯನ್ನು ಹಾಕಲು ಮರೆಯದಿರಿ :)

ಕೇಶವ ಹೋಮ್^ವರ್ಕ್ ಮಾಡಿದ ಮೇಲೆ...

ಹೋದ ಬಾರಿ ಕೇಶವ ಗಣಿತ ಕಲಿಯುವುದನ್ನು ನೋಡಿದಿರಿ. ಈಗ ಮುಂದೆ :)

ಕೇಶವ ಮತ್ತು ನಾಣಿ -- ಗಣಿತ

ನೀವು ಗಣಿತ ಬಲ್ಲವರೆ? ಹೇಗೆ? ಶಾಲೆಯಲ್ಲಿ ಕಲಿತದ್ದಾ ಅಥವ ಮನೆಯಲ್ಲಿ ಕಲಿತದ್ದ? ಇಲ್ಲ ಸ್ವಂತ ಅಭ್ಯಾಸವೋ?

ಗಣಿತ ಕಲಿಯೋದೇ ಒಂದು ದೊಡ್ಡ ಕೆಲಸ ಎಂದು ಮಕ್ಕಳು ಹೇಳುವುದು ನೀವು ಕೇಳಿರಬಹುದು. ಕೆಲವರಿಗೆ ಗಣಿತವೆಂದರೆ ಸಾಕು ತಲೆ ತಿರುಗುತ್ತೆ, ಕೆಲವರು ಗಣಿತ ಎಂಬ ಶಬ್ದ ಕೇಳಿದೊಡನೆಯೇ ಓಡಿ ಹೋಗ್ತಾರೆ.

ನಿಮ್ಮ ಬಾಲ್ಯದಲ್ಲಿ ನೀವು ಪಟ್ಟ ಶ್ರಮ ಜ್ಞಾಪಿಸಿಕೊಳ್ಳಿ. ಕಷ್ಟ ಪಟ್ಟು, ಬೆವರು ಸುರಿಸಿ,ಅರೆನಿದ್ದೆಯಲ್ಲಿ ಬಿಡದೆ ಗಣಿತವನ್ನು ಕಲಿತು/ಕಲಿಯುತ್ತಿರುವ ಮಕ್ಕಳಿಗೆ ಸಮರ್ಪಿತವಾಗಿ ಈ ಸೀರೀಸ್ :)

ಓದಿ ಹೇಗಿದೆ ಎಂದು ಪ್ರತಿಕ್ರಿಯೆ ನೀಡಿ

Calvin and Hobbes in Kannada -- ಕೇಶು ಮತ್ತು ನಾಣಿ

Calvin and Hobbes in Kannada -- ಕೇಶು ಮತ್ತು ನಾಣಿ

This is a humble attempt to bring out the very famous Calvin & Hobbes in kannada. This comic is an excellent creation by Bill Waterson bringing nostalgia in everybody's mind. Frankly, no other cartoonist has been able to capture childhood and its intricacies in its entirity as much as Bill Waterson has been able to.

Calvin is a young lad who first appeared in the newspapers way back in 1985. He has a pet stuffed tiger who he believes is a real one. He communicates all his feelings to Hobbes. He is at times extremely dumb -- so dumb that he cannot add 6+5 together, but at times so intelligent to tell his parents abt the existence of dinosaurs millions of years ago.

This is an attempt to bring C&H to kannada. There is no commercial/monetory benefit obtained through this work and is done purely for fun and nucleates from the passion I have as an ardent C&H fan. If anybody is offended by this work or the original creator is not satisfied by this work, I shall be happy to remove them. But please feel free to post your comments after viewing the cartoons. :)

Original creation: Bill Waterson
Translation & reproduction: Arun Prakash


ಕ್ಯಾಲ್ವಿನ್ ಮತ್ತು ಹಬ್ಬಸ್ ಎಷ್ಟೋ ಜನರ ಅಚ್ಚುಮೆಚ್ಚಿನ ಕಾರ್ಟೂನ್. ಇದನ್ನು ಕನ್ನಡಕ್ಕೆ ತರುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನದಲ್ಲಿ ಯಾವುದೇ ರೀತಿಯ ಆರ್ಥಿಕ ಲಾಭ ಪಡೆಯಲಾಗುತ್ತಿಲ್ಲ. ಇದನ್ನು ನಾನು ನನಗೆ C&H ಮೇಲೆ ಇರುವ ಅಭಿಮಾನಕ್ಕಾಗಿ ಮಾಡುತ್ತಿದ್ದೇನೆ. ಓದಿ ನಿಮ್ಮ ಟೀಕೆ ಟಿಪ್ಪಣಿಗಳನ್ನು ಹಾಕಲು ಮರೆಯದಿರಿ :)

ಮೊದಲನೆಯದು ನಾನು ಮೊದಲಬಾರಿಗೆ ಈ ಅನುವಾದ ಕಾರ್ಯಕ್ರಮ ಶುರು ಮಾಡಿದಾಗ ಪ್ರಯತ್ನಿಸಿದ ಮೊದಲ ಕಾರ್ಟೂನ್. ಎರಡನೆಯದು -- ಸೆಕೆಂಡ್ ಅಟ್ಟೆಂಪ್ಟ್. ಈ ಕಾರ್ಟೂನ್^ಗಳನ್ನ ಪದಕ್ಕೆ ಪದ ಅನುವಾದ ಮಾಡದೇ ಭಾವನಗಳನ್ನ ಅನುವಾದ ಮಾಡುವ ಪ್ರಯತ್ನ. ಅದಕ್ಕೇ ಕೆಲವೊಮ್ಮೆ ನಿಮಗೆ ಮೂಲ ಕಾರ್ಟೂನಿಗೂ ಕನ್ನಡದ ಅನುವಾದಕ್ಕೂ ಬಹಳಷ್ಟು ವ್ಯತ್ಯಾಸ ಕಂಡು ಬರಬಹುದು.

ಮೂಲ: ಬಿಲ್ ವಾಟರ್^ಸನ್
ಕನ್ನಡಕ್ಕೆ: ಅರುಣ ಪ್ರಕಾಶ