Thursday, April 20, 2006
ಅಂತರಿಕ್ಷದಲ್ಲಿ ೬+೫ ಕೂಡಿಸಿದ ಕೇಶು...
ಗಣಿತದ ಸೀರೀಸ್ ಮುಂದು ವರಿಸುವ ಮುಂಚೆ ಕೆಲವು ಮುನ್ನುಡಿ. ಮೊದಲನೆಯದಾಗಿ ಕೆಲವು ಓದುಗರು ಫೋಟೊ ಎಡಿಟಿಸಲು ಯುನಿಕೋಡ್ ಬಳಸಿ ಎಂದು ಹೇಳಿದ್ದಾರೆ. ನನಗೆ ಇದು ಅರ್ಥವಾಗಲಿಲ್ಲ. ನಾನು ಮಾಡೋದು ಹೀಗೆ. ಕಾರ್ಟೂನ್ ಜಿಫ್ ಗಳನ್ನ ತೆಗೆದುಕೊಂಡು, ಅದರ ಇಂಗ್ಲಿಷ್ ಮಾತುಗಳನ್ನ ತೆಗೆದು, ಕನ್ನಡವನ್ನ ಟೈಪಿಸುತ್ತೇನೆ. ಕೆಲವೊಮ್ಮೆ ಸ್ವಲ್ಪ ಕತ್ತರಿಸು ಅಂಟಿಸುವ ಕೆಲಸ ಮಾಡಬೇಕಾಗುತ್ತೆ. ನಾನು ಮಾಡುವುದು ಹೀಗೆ. ಈ ಯುನಿಕೋಡ್ ಎಡಿಟಿಸೋದು ಅಂದರೆ ಏನು? ಯಾರಾದರೂ ದಯವಿಟ್ಟು ಸ್ವಲ್ಪ ವಿವರವಾಗಿ ಹೇಳುತ್ತೀರ? :)
ಇನ್ನು ಮುಂದೆ ಇಂದು ಭಾರತ ಇಂಗ್ಲಾಂಡ್ ವಿರುದ್ಧ ಎರಡೆನೆಯ ಟೆಸ್ಟ್ ಪಂದ್ಯದಲ್ಲಿ ತೇರ್ಗಡೆಯಾಗಿ ಸರಣಿಯಲ್ಲಿ 1-0 ಯ ಮುನ್ನಡೆ ಪಡೆದಿದೆ. ಕುಂಬ್ಳೆ 500 ವಿಕೆಟ್ ಪಡೆದ ಮೊದಲ ಭಾರತೀಯರಾಗಿದ್ದಾರೆ. ಮೊದಲನೆಯ ಟೆಸ್ಟ್ ನಲ್ಲಿ ಗೆಲುವು ಸಾಧನೆಯ ಬಗ್ಗೆ ಸ್ವಲ್ಪವೂ ಇಚ್ಛೆ ತೋರಿಸಲಿಲ್ಲವೆಂದು ಹೇಳಿದವರಿಗೆ ಒಳ್ಳೆಯ ಉತ್ತರ ನೀಡಿದೆ.
ಆದರೆ ಭಾರತೀಯ ಗೆಲುವಿನ ಕೆಲವು ಘಂಟೆಗಳ ಮುನ್ನ ನಡೆದ ಒಂದು ಆಟ ಜಗತ್ತಿನ ಕ್ರಿಕೆಟ್ ಆಸಕ್ತರ ಬಾಯಿಯಲ್ಲಿ ಇನ್ನೂ ಉಳಿದಿದೆ.
ನಿನ್ನೆ ನಡೆದ ಅಮೋಘ ಘಟನೆ -- ಆಸ್ಟ್ರೇಲಿಯ ೫೦ ಓವರ್ ಗಳಲ್ಲಿ 434ರನ್. ದಕ್ಷಿಣ ಆಫ್ರಿಕ ತಾವೇನೂ ಕಮ್ಮಿ ಇಲ್ಲವೆಂದು 49.5 ಓವರ್ ಗಳಲ್ಲಿ 438 ರನ್. ಅಬ್ಭಾ ಎಂತ ಅದ್ಭುತ ಸಾಧನೆ. ಈ ಮ್ಯಾಚ್ ನ ಹೈಲೈಟ್ಸ್ ನೋಡಿದೆ. ಹೊಸದಾಗಿ ಶುರುವಾಗಿರುವ 20-20 ಪಂದ್ಯದ ಹಾಗೆ ಇತ್ತು. ಪ್ರಾಯಶಃ ಈ 20-20 ಪಂದ್ಯಗಳ ಪ್ರಭಾವವೇ ಇರಬಹುದು. ಈ ಸರಣಿಯ ಮುಂಚೆ ದ.ಆ ಆಸ್ಟ್ರೇಲಿಯವನ್ನು 20-20 ಪಂದ್ಯದಲ್ಲಿ ಸೋಲಿಸಿದ್ದು ನಾವು ಇಲ್ಲಿ ಸ್ಮರಿಸಬಹುದು.
ಬೈ.ದಿ.ವೆ ಭಾರತ ಯಾವಾಗ 20-20 ಆಡುವುದು? ಅಥವ ಏಕ ದಿವಸೀಯ ಪಂದ್ಯಗಳು ಶುರುವಾದಾಗ ಮಾಡಿದ ತಪ್ಪನ್ನು ಈಗಲೂ ಮಾಡುವರ?
ಓ.ಕೆ. ಬ್ಲೇಡ್ ಸಾಕು. ಈಗ ಕಾರ್ಟೂನ್. ದ. ಆ ವಿರುದ್ಧ ಇದ್ದ ಸವಾಲಿನಂತೆ ದೊಡ್ಡದಲ್ಲದಿದ್ದರೂ ಯಾಕೋ ನಮ್ಮ ಕೇಶು 6+5ರನ್ನೂ ಕೂಡಿಸಲು...

ಕೇಶು ಕ್ಯಾಪ್ಟೆನ್ ಕೆಂಪಣ್ಣನಾದ...
ಗಣಿತದಲ್ಲಿ ಪ್ರವೀಣನಲ್ಲದಿದ್ದರೂ, ಕೇಶುಗೆ ಬೇರೆ ಏಷ್ಟೋ ವಿಷಯಗಳಲ್ಲಿ ಬಹಳ ಆಸಕ್ತಿ. ತಾನು ಒಬ್ಬ ಅಂತರಜಾಲದ ಮಹಾಯಾನಿಯಾಗಬೇಕೆಂಬ ಆಸೆ. ಇಲ್ಲದಿದ್ದರೆ ಸೂಪರ್ ಮ್ಯಾನ್ ಆಗುವ ಆಸೆ (ಇದನ್ನು ನೀವು ನನ್ನ ಮೊದಲ ಕಾರ್ಟೂನಿನಲ್ಲಿ ನೋಡಬಹುದು) ಹೀಗೆ ಎಂದಾದರೊಮ್ಮೆ ದೊಡ್ಡ ಮನುಷ್ಯನಾಗಲು ಕೇಶು ಆಶಿಸುತ್ತಿದ್ದಾನೆ.
ಈ ಕಳೆದ ಕೆಲ ದಿನಗಳಲ್ಲಿ ಕೆಲವು ಹೊಸ ಪಾತ್ರಗಳ ಪರಿಚಯವಾಗಿದೆ -- ಮೇರಿ ಮೇಡಂ, ಸುಶಿ. ಇದೇ ದಿಟ್ಟಿನಲ್ಲಿ ಇಂದು ಕ್ಯಾಪ್ಟೆನ್ ಕೆಂಪಣ್ಣ. ನೋಡಿ ಆನಂದಿಸಿ :)
